ಉಲ್ಲಂಘನೆಗಳನ್ನು ವರದಿ ಮಾಡುವುದು
ಈ ಲೇಖನವು X ನಿಯಮಗಳು ಮತ್ತು ಸೇವಾ ನಿಯಮಗಳ ಸಂಭಾವ್ಯ ಉಲ್ಲಂಘನೆಗಳನ್ನು ಹೇಗೆ ವರದಿ ಮಾಡುವುದು ಎಂಬುದರ ಅವಲೋಕನವನ್ನು ಒದಗಿಸುತ್ತದೆ.
ಇವುಗಳನ್ನು ಒಳಗೊಂಡಂತೆ ಕೆಲವು ಉಲ್ಲಂಘನೆಗಳಿಗೆ ಪ್ರತ್ಯೇಕ ಟ್ವೀಟ್, ಪಟ್ಟಿ ಅಥವಾ ಪ್ರೊಫೈಲ್‌ನಿಂದ ನೀವು ನೇರವಾಗಿ ವರದಿ ಮಾಡಬಹುದು: ಸ್ಪ್ಯಾಮ್, ನಿಂದನೀಯ ಅಥವಾ ಹಾನಿಕಾರಕ ವಿಷಯ, ಅಸೂಕ್ತ ಜಾಹೀರಾತುಗಳು, ಸ್ವಯಂ-ಹಾನಿ ಮತ್ತು ಸುಳ್ಳುಗುರುತು. ಇತರೆ ಪ್ರಕಾರಗಳ ಉಲ್ಲಂಘನೆಗಳನ್ನು ವರದಿ ಮಾಡುವ ಕುರಿತು ಮಾಹಿತಿಗಾಗಿ, ಕೆಳಗಿನ ನಿರ್ದಿಷ್ಟ ಪ್ರಕಾರಗಳ ಉಲ್ಲಂಘನೆಗಳನ್ನು ಹೇಗೆ ವರದಿ ಮಾಡುವುದು ವಿಭಾಗವನ್ನು ನೋಡಿ.
ಉಲ್ಲಂಘನೆಗಳಿಗಾಗಿ ಪ್ರತ್ಯೇಕ ಟ್ವೀಟ್ ಅನ್ನು ವರದಿ ಮಾಡುವುದು ಹೇಗೆ:
ಉಲ್ಲಂಘನೆಗಳಿಗಾಗಿ ಟ್ವೀಟ್‌ಗಳು, ಪಟ್ಟಿಗಳು ಅಥವಾ ನೇರ ಸಂದೇಶಗಳನ್ನು ಹೇಗೆ ವರದಿ ಮಾಡುವುದು ಎಂಬುದನ್ನು ತಿಳಿಯಿರಿ.
ಉಲ್ಲಂಘನೆಗಳಿಗಾಗಿ ಮಾಧ್ಯಮವನ್ನು ವರದಿ ಮಾಡುವುದು ಹೇಗೆ:
ಮಾಧ್ಯಮಕ್ಕೆ ಟ್ವೀಟ್‌ಗಳನ್ನು ಹೇಗೆ ವರದಿ ಮಾಡುವುದು ಎಂಬುದನ್ನು ತಿಳಿಯಿರಿ ಮತ್ತು X ಮಾಧ್ಯಮ ನೀತಿ ಓದಿ.
ಉಲ್ಲಂಘನೆಗಳಿಗಾಗಿ ಪ್ರೊಫೈಲ್‌ಗಳನ್ನು ಹೇಗೆ ವರದಿ ಮಾಡುವುದು:
- ನೀವು ವರದಿ ಮಾಡಲು ಬಯಸುವ ಪ್ರೊಫೈಲ್ ತೆರೆಯಿರಿ.
- ಓವರ್‌ಫ್ಲೋ ಐಕಾನ್ ಆಯ್ಕೆ ಮಾಡಿ
- ವರದಿ ಮಾಡಿ ಅನ್ನು ಆಯ್ಕೆಮಾಡಿ ಮತ್ತು ನೀವು ವರದಿ ಮಾಡಲು ಬಯಸುವ ಸಮಸ್ಯೆಯ ಪ್ರಕಾರವನ್ನು ಆಯ್ಕೆಮಾಡಿ.
- ಒಂದು ವೇಳೆ ನೀವು ಅವು ನಿಂದನೀಯ ಅಥವಾ ಹಾನಿಕಾರಕವಾಗಿವೆ ಎಂದು ಆಯ್ಕೆಮಾಡಿದರೆ, ನೀವು ವರದಿ ಮಾಡುತ್ತಿರುವ ಸಮಸ್ಯೆಯ ಕುರಿತು ಹೆಚ್ಚುವರಿ ಮಾಹಿತಿ ನೀಡುವಂತೆ ನಾವು ನಿಮ್ಮನ್ನು ಕೇಳುತ್ತೇವೆ. ನಿಮ್ಮ ವರದಿಯನ್ನು ಮೌಲ್ಯಮಾಪನ ಮಾಡುವುದಕ್ಕಾಗಿನ ಉತ್ತಮ ಸಂದರ್ಭವನ್ನು ನಾವು ಹೊಂದುವುದಕ್ಕಾಗಿ ನೀವು ವರದಿ ಮಾಡುತ್ತಿರುವ ಖಾತೆಯಿಂದ ಹೆಚ್ಚುವರಿ ಟ್ವೀಟ್‌ಗಳನ್ನು ಆಯ್ಕೆಮಾಡುವಂತೆ ಸಹ ನಾವು ನಿಮ್ಮನ್ನು ಕೇಳಬಹುದು.
- ನೀವು ವರದಿ ಮಾಡುತ್ತಿರುವ ಟ್ವೀಟ್‌ಗಳ ಪಠ್ಯವನ್ನು ನಿಮಗೆ ನಾವು ಕಳುಹಿಸುವ ನಮ್ಮ ಅನುಸರಣೆ ಇಮೇಲ್‌ಗಳು ಮತ್ತು ಸೂಚನೆಗಳಲ್ಲಿ ಸೇರಿಸಿಕೊಳ್ಳುತ್ತೇವೆ. ಈ ಮಾಹಿತಿಯನ್ನು ಸ್ವೀಕರಿಸುವುದರಿಂದ ಹೊರಗುಳಿಯಲು, ಈ ವರದಿಯ ಕುರಿತಾದ ನವೀಕರಣಗಳು ಈ ಟ್ವೀಟ್‌ಗಳನ್ನು ತೋರಿಸಬಹುದು ಎಂಬುದರ ಪಕ್ಕದಲ್ಲಿರುವ ಪೆಟ್ಟಿಗೆಯಲ್ಲಿನ ಗುರುತನ್ನು ದಯವಿಟ್ಟು ತೆಗೆಯಿರಿ.
- ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ X ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಹೆಚ್ಚುವರಿ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.
ಕ್ಷಣದಲ್ಲಿ ನಿರ್ದಿಷ್ಟ ವಿಷಯವನ್ನು ಹೇಗೆ ವರದಿ ಮಾಡುವುದು
ಉಲ್ಲಂಘನೆಗಳಿಗಾಗಿ ಕ್ಷಣದಲ್ಲಿ ಟ್ವೀಟ್ ಅನ್ನು ಹೇಗೆ ವರದಿ ಮಾಡುವುದು:
- ಕ್ಷಣದೊಳಗೆ ನೀವು ವರದಿ ಮಾಡಲು ಬಯಸುವ ಟ್ವೀಟ್‌ಗೆ ನ್ಯಾವಿಗೇಟ್ ಮಾಡಿ.
- ಪಟ್ಟಿಗಳು ಐಕಾನ್ ಅನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.
- ಟ್ವೀಟ್ ವರದಿ ಮಾಡಿ ಎಂಬುದನ್ನು ಕ್ಲಿಕ್ ಮಾಡಿ ಅಥವಾ ತಟ್ಟಿ.
- ನೀವು ವರದಿ ಮಾಡಲು ಬಯಸುವ ಸಮಸ್ಯೆಯ ಪ್ರಕಾರವನ್ನು ಆಯ್ಕೆಮಾಡಿ.
- ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ X ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.
ಉಲ್ಲಂಘನೆಗಳಿಗಾಗಿ ಕ್ಷಣವನ್ನು ಹೇಗೆ ವರದಿ ಮಾಡುವುದು:
ನೀವು ಯಾವ ವಿಧದ ಉಲ್ಲಂಘನೆಯನ್ನು ವರದಿ ಮಾಡುತ್ತಿದ್ದೀರಿ ಎಂಬುದನ್ನು ಆಧರಿಸಿ, ಕ್ಷಣವನ್ನು ವರದಿ ಮಾಡಲು ಹಲವು ವಿಧಾನಗಳಿವೆ. ಈ ಕೆಳಗೆ ನೀವು ನೋಡಬಹುದಾದ ಉಲ್ಲಂಘನೆಗಳ ವಿಧಗಳ ಪಟ್ಟಿ ಇದೆ:
ನೀವು ವರದಿ ಮಾಡುವ ಉಲ್ಲಂಘನೆಯ ವಿಧವನ್ನು ನೀವು ಗುರುತಿಸಿದ ನಂತರ, ಈ ಕೆಳಗಿನ ಸೂಚನೆಗಳನ್ನು ಅನುಸರಿಸಿ.
- ಈ ಕೆಳಗೆ ಪಟ್ಟಿ ಮಾಡಿದ ಒಂದು ನಮೂನೆಯನ್ನು ಆಯ್ಕೆ ಮಾಡಿ.
- ನೀವು ವರದಿ ಮಾಡಲು ಬಯಸುವ ಕ್ಷಣದ URL ನಮೂದಿಸಿ.
- ಉಲ್ಲಂಘನೆಯಲ್ಲಿರಬಹುದಾದ ಕ್ಷಣದಲ್ಲಿನ 5 ಟ್ವೀಟ್‌ಗಳನ್ನು ನಮಗೆ ನೀಡಿ.
- ಒಮ್ಮೆ ನಿಮ್ಮ ವರದಿಯನ್ನು ನೀವು ಸಲ್ಲಿಸಿದಾಗ, ನಿಮ್ಮ X ಅನುಭವವನ್ನು ಸುಧಾರಿಸುವುದಕ್ಕಾಗಿ ನೀವು ತೆಗೆದುಕೊಳ್ಳಬಹುದಾದ ಕ್ರಮಗಳಿಗಾಗಿ ಶಿಫಾರಸುಗಳನ್ನು ನಾವು ಒದಗಿಸುತ್ತೇವೆ.
X ಸ್ಪೇಸ್ ಅಥವಾ ಸ್ಪೇಸ್‌ನಲ್ಲಿ ವ್ಯಕ್ತಿಯನ್ನು ವರದಿ ಮಾಡುವುದು ಹೇಗೆ
ಸ್ಪೇಸ್ ಅಥವಾ ಸ್ಪೇಸ್‌ನಲ್ಲಿ ಯಾರಾದರೂ X ನಿಯಮಗಳು ಮತ್ತು ನೀತಿಗಳನ್ನು ಉಲ್ಲಂಘಿಸಿದ್ದಾರೆ ಎಂದು ನೀವು ಭಾವಿಸಿದರೆ, ಅವರನ್ನು ನೀವು ವರದಿ ಮಾಡಬಹುದು. ಸ್ಪೇಸ್ ಮತ್ತು ಸ್ಪೇಸ್‌ನಲ್ಲಿನ ಯಾವುದೇ ಖಾತೆಯನ್ನು ಮಾತನಾಡುವವರು ಮತ್ತು ಶ್ರೋತೃಗಳು ವರದಿ ಮಾಡಬಹುದು.
ಉಲ್ಲಂಘನೆಗಳಿಗಾಗಿ ಸ್ಪೇಸ್ ಹೇಗೆ ವರದಿ ಮಾಡುವುದು:
- ಸ್ಪೇಸ್‌ನಲ್ಲಿರುವಾಗ, ಓವರ್‌ಫ್ಲೋ ಐಕಾನ್ ತಟ್ಟಿ .
- ಈ ಸ್ಪೇಸ್ ವರದಿ ಮಾಡಿ ಎಂಬುದನ್ನು ತಟ್ಟಿ.
- ನೀವು ನಮಗೆ ವರದಿ ಮಾಡಲು ಬಯಸುವ ಸಮಸ್ಯೆಯ ಪ್ರಕಾರವನ್ನು ಆಯ್ಕೆಮಾಡಿ.
- ಸ್ಪೇಸ್ ಅನ್ನು ನೀವು ವರದಿ ಮಾಡಿದ ನಂತರ, ತೊರೆಯಲು ಅಥವಾ ಮುಂದುವರಿಯಲು ಆಯ್ಕೆಯನ್ನು ನೀವು ಹೊಂದಿರುತ್ತೀರಿ.
ಉಲ್ಲಂಘನೆಗಳಿಗಾಗಿ ಖಾತೆಯನ್ನು ವರದಿ ಮಾಡುವುದು ಹೇಗೆ:
- ಸ್ಪೇಸ್‌ನಲ್ಲಿರುವಾಗ, ಖಾತೆಯ ಪ್ರೊಫೈಲ್ ಫೋಟೋ ಮೇಲೆ ತಟ್ಟಿ.
- ವರದಿ ಮಾಡಿ ತಟ್ಟಿ.
- ನೀವು ನಮಗೆ ವರದಿ ಮಾಡಲು ಬಯಸುವ ಸಮಸ್ಯೆಯ ಪ್ರಕಾರವನ್ನು ಆಯ್ಕೆಮಾಡಿ.
- ಖಾತೆಯನ್ನು ನೀವು ವರದಿ ಮಾಡಿದ ನಂತರ, ಸ್ಪೇಸ್ ತೊರೆಯಲು ಅಥವಾ ಮುಂದುವರಿಯಲು ಆಯ್ಕೆಯನ್ನು ನೀವು ಹೊಂದಿರುತ್ತೀರಿ.
ನಿರ್ದಿಷ್ಟ ಪ್ರಕಾರಗಳ ಉಲ್ಲಂಘನೆಗಳನ್ನು ಹೇಗೆ ವರದಿ ಮಾಡುವುದು
ಕೆಳಗಿನ ಮಾಹಿತಿಯು ನಮ್ಮ ಸಹಾಯ ಕೇಂದ್ರದ ಮೂಲಕ ನೀವು ನಮಗೆ ವರದಿ ಮಾಡಬಹುದಾದ ಉಲ್ಲಂಘನೆಗಳ ಪ್ರಕಾರಗಳನ್ನು ತಿಳಿಸುತ್ತದೆ.
- ಅನಧಿಕೃತ ಟ್ರೇಡ್ಮಾರ್ಕ್ ಬಳಕೆ: X ನ ಟ್ರೇಡ್ಮಾರ್ಕ್ ನೀತಿ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ಇಲ್ಲಿ ವರದಿಯನ್ನು ಸಲ್ಲಿಸಿ.
- ಕೃತಿಸ್ವಾಮ್ಯಗೊಳಿಸಿದ ವಸ್ತುಗಳ ಅನಧಿಕೃತ ಬಳಕೆ: X ನ ಕೃತಿಸ್ವಾಮ್ಯ ನೀತಿ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ಇಲ್ಲಿ ವರದಿಯನ್ನು ಸಲ್ಲಿಸಿ.
- ನಕಲಿ ಸರಕುಗಳ ಮಾರಾಟ ಅಥವಾ ಪ್ರಚಾರ: X ನ ನಕಲಿ ಸರಕುಗಳ ನೀತಿ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ಇಲ್ಲಿ ವರದಿಯನ್ನು ಸಲ್ಲಿಸಿ.
- ಮಕ್ಕಳ ಕುರಿತಾಗಿನ ಗೌಪ್ಯತೆ ನೀತಿ: ನಮ್ಮ ಸೇವೆಗಳು 13 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ನಿರ್ದೇಶಿತವಾಗಿಲ್ಲ. ನಿಮ್ಮ ಸಮ್ಮತಿ ಇಲ್ಲದೆಯೇ ನಿಮ್ಮ ಮಗುವು ನಮಗೆ ವೈಯಕ್ತಿಕ ಮಾಹಿತಿಯನ್ನು ನೀಡಿದೆ ಎಂಬುದಾಗಿ ನಿಮಗೆ ತಿಳಿದುಬಂದರೆ, ದಯವಿಟ್ಟು ನಮ್ಮ ಗೌಪ್ಯತೆ ಪತ್ರದ ಮೂಲಕ ನಮ್ಮನ್ನು ಸಂಪರ್ಕಿಸಿ. ನಮ್ಮ ಗೌಪ್ಯತೆ ನೀತಿ ನಲ್ಲಿ ಮಕ್ಕಳ ಕುರಿತಾಗಿನ ನಮ್ಮ ನೀತಿಯ ಕುರಿತು ಇನ್ನಷ್ಟು ತಿಳಿಯಿರಿ.
- ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ: ನಮ್ಮ ಮಗುವಿನ ಲೈಂಗಿಕ ಶೋಷಣೆಯ ನೀತಿ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ಇಲ್ಲಿ ವರದಿಯನ್ನು ಸಲ್ಲಿಸಿ.
- ಅಶ್ಲೀಲತೆ: X ನಲ್ಲಿನ ಪ್ರೊಫೈಲ್ ಫೋಟೋಗಳು ಮತ್ತು/ಅಥವಾ ಶೀರ್ಷಿಕೆಯ ಫೋಟೋಗಳಲ್ಲಿ ಬಳಸಲಾಗುವ ಕೆಟ್ಟದಾದಾ ಅಥವಾ ಅಶ್ಲೀಲ ಚಿತ್ರಗಳನ್ನು ವರದಿ ಮಾಡಲು, ಸೂಕ್ಷ್ಮ ಮಾಧ್ಯಮವನ್ನು ವರದಿ ಮಾಡುವುದು ಕುರಿತಾಗಿನ ನಮ್ಮ ಸೂಚನೆಗಳನ್ನು ಅನುಸರಿಸಿ.
- ವೈಯಕ್ತಿಕ ಅಥವಾ ಬ್ರ್ಯಾಂಡ್ನ ಸುಳ್ಳುಗುರುತು: ನಮ್ಮ ಸುಳ್ಳುಗುರುತಿನ ನೀತಿ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ಇಲ್ಲಿ ವರದಿಯನ್ನು ಸಲ್ಲಿಸಿ.
- X ನಲ್ಲಿ ಪೋಸ್ಟ್ ಮಾಡಲಾದ ಖಾಸಗಿ ಮಾಹಿತಿ: ನಮ್ಮ ಖಾಸಗಿ ಮಾಹಿತಿಯ ನೀತಿ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ಇಲ್ಲಿ ವರದಿಯನ್ನು ಸಲ್ಲಿಸಿ.
- ನಿಂದನೀಯ ನಡವಳಿಕೆ ಮತ್ತು ಹಿಂಸಾತ್ಮಕ ಬೆದರಿಕೆಗಳು: ನಮ್ಮ ನಿಂದನೀಯ ನಡವಳಿಕೆಯ ನೀತಿ ಕುರಿತು ಇನ್ನಷ್ಟು ತಿಳಿಯಿರಿ ಮತ್ತು ಇಲ್ಲಿ ವರದಿಯನ್ನು ಸಲ್ಲಿಸಿ.
- ಸ್ಪ್ಯಾಮ್ ಮತ್ತು ಸಿಸ್ಟಂ ನಿಂದನೆ: X ನ ನಿಮ್ಮ ಬಳಕೆಗೆ ಪರಿಣಾಮ ಬೀರುತ್ತಿರುವ ಸ್ಪ್ಯಾಮ್ ಅಥವಾ ಮಾಲ್ವೇರ್ ಸಮಸ್ಯೆಯನ್ನು ನೀವು ಅನುಭವಿಸುತ್ತಿದ್ದರೆ, ಇಲ್ಲಿ ವರದಿಯನ್ನು ಸಲ್ಲಿಸಿ.
- X ಜಾಹೀರಾತುಗಳ ನೀತಿಯ ಉಲ್ಲಂಘನೆ: X ಜಾಹೀರಾತುಗಳನ್ನು ಹೇಗೆ ಗುರುತಿಸುವುದು ಮತ್ತು ವರದಿಯನ್ನು ಸಲ್ಲಿಸದೆಯೇ ಸಮಸ್ಯೆಗಳನ್ನು ಪರಿಹರಿಸುವ ಕುರಿತಂತೆ ನೀವು ತೆಗೆದುಕೊಳ್ಳಬಹುದಾದ ಕ್ರಮಗಳು. ನಮ್ಮ ನೀತಿಗಳ ಉಲ್ಲಂಘನೆಯಲ್ಲಿರಬಹುದಾದ X ಜಾಹೀರಾತನ್ನು ವರದಿ ಮಾಡುವುದು.
ಗಮನಿಸಿ: ಸಹಾಯ ಕೇಂದ್ರದ ಮೂಲಕ X ನಿಯಮಗಳು ಮತ್ತು ಸೇವಾ ನಿಯಮಗಳ ಸಂಭಾವ್ಯ ಉಲ್ಲಂಘನೆಗಳನ್ನು ವರದಿ ಮಾಡುವಾಗ, ಪರಿಣಾಮಕ್ಕೊಳಗಾದ ಖಾತೆಯಂತಹ ಮೂರನೇ ವ್ಯಕ್ತಿಗಳ ಜೊತೆಗೆ ನಿಮ್ಮ ವರದಿಯ ಭಾಗವನ್ನು ಹಂಚಿಕೊಳ್ಳುವುದಕ್ಕಾಗಿ ನಮಗೆ ಅನುಮತಿಸಲು ನಿಮ್ಮನ್ನು ಕೇಳಬಹುದು.
ಬೇರೊಬ್ಬರ ಪರವಾಗಿ ಹೇಗೆ ವರದಿ ಮಾಡುವುದು
ಮತ್ತೊಬ್ಬ ವ್ಯಕ್ತಿಯ ಪರವಾಗಿ ನೀವು ಉಲ್ಲಂಘನೆಗಳನ್ನು ವರದಿ ಮಾಡಬಹುದು. ಮೇಲೆ ಪಟ್ಟಿ ಮಾಡಲಾಗಿರುವ ವರ್ಗಗಳು ಮತ್ತು ಸೂಚನೆಗಳನ್ನು ನೋಡಿ ಅಥವಾ ನಿಮ್ಮ ವರದಿಯನ್ನು ಸಲ್ಲಿಸಲು ನಮ್ಮನ್ನು ಸಂಪರ್ಕಿಸಿ. ನೀವು ಟ್ವೀಟ್ ಅಥವಾ ಪ್ರೊಫೈಲ್‌ನಿಂದ ಸಹ ನೇರವಾಗಿ ವರದಿ ಮಾಡಬಹುದು (ಮೇಲಿನ ವಿಭಾಗವಾದ ಟ್ವೀಟ್, ಪಟ್ಟಿ ಅಥವಾ ಪ್ರೊಫೈಲ್‌ನಿಂದ ನೇರವಾಗಿ ಹೇಗೆ ವರದಿ ಮಾಡುವುದುಅನ್ನು ನೋಡಿ).