X ನಿಯಮಗಳು
ಸಾರ್ವಜಿಕ ಸಂವಾದವನ್ನು X ಉದ್ದೇಶವಾಗಿದೆ. ಹಿಂಸೆ, ದೌರ್ಜನ್ಯ ಮತ್ತು ಇತರ ಇದೇ ರೀತಿಯ ವರ್ತನೆಗಳು ತಮ್ಮ ಬಗ್ಗೆ ಅಭಿವ್ಯಕ್ತಿ ವ್ಯಕ್ತಪಡಿಸಲು ಜನರನ್ನು ನಿರುತ್ಸಾಹಗೊಳಿಸುತ್ತವೆ, ಮತ್ತು ಇದು ಅಂತಿಮವಾಗಿ ಜಾಗತಿಕ ಸಾರ್ವಜನಿಕ ಸಂವಾದದ ಮೌಲ್ಯವನ್ನು ಕ್ಷೀಣಿಸುತ್ತದೆ. ಎಲ್ಲ ವ್ಯಕ್ತಿಗಳೂ ಸಾರ್ವಜನಿಕ ಸಮವಾದದಲ್ಲಿ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ಭಾಗವಹಿಸುವದನ್ನು ಖಚಿತಪಡಿಸಲು ನಮ್ಮ ನಿಯಮಗಳಿವೆ.
ಸುರಕ್ಷತೆ
ಹಿಂಸಾತ್ಮಕ ಭಾಷಣ: ನೀವು ಬೆದರಿಕೆ ಹಾಕಬಾರದು, ಪ್ರಚೋದಿಸಬಾರದು, ವೈಭವೀಕರಿಸಬಾರದು, ಅಥವಾ ಹಿಂಸೆ ಅಥವಾ ಹಾನಿಯ ಬಯಕೆಯನ್ನು ವ್ಯಕ್ತಪಡಿಸಬಾರದು. ಇನ್ನಷ್ಟು ತಿಳಿಯಿರಿ.
ಹಿಂಸಾತ್ಮಕ ಮತ್ತು ದ್ವೇಷಪೂರಿತ ಘಟಕಗಳು: ನೀವು ಹಿಂಸಾತ್ಮಕ ಮತ್ತು ದ್ವೇಷಪೂರಿತ ಘಟಕಗಳ ಚಟುವಟಿಕೆಗಳನ್ನು ಅಫಿಲಿಯೇಟ್ ಮಾಡಲು ಅಥವಾ ಪ್ರಚಾರ ಮಾಡಲು ಸಾಧ್ಯವಿಲ್ಲ. ಇನ್ನಷ್ಟು ತಿಳಿಯಿರಿ.
ಮಕ್ಕಳ ಲೈಂಗಿಕ ದೌರ್ಜನ್ಯ: X ನಲ್ಲಿ ಮಕ್ಕಳ ಲೈಂಗಿಕ ದೌರ್ಜನ್ಯಕ್ಕೆ ನಾವು ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ. ಇನ್ನಷ್ಟು ತಿಳಿಯಿರಿ.
ನಿಂದನೆ/ದೌರ್ಜನ್ಯ: ನೀವು ನಿಂದನೀಯ ವಿಷಯವನ್ನು ಹಂಚಿಕೊಳ್ಳಬಾರದು, ಇತರರ ಉದ್ದೇಶಿತ ದೌರ್ಜನ್ಯವೆಸಗುವಲ್ಲಿ ತೊಡಗಿಸಿಕೊಳ್ಳಬಾರದು, ಅಥವಾ ಹೀಗೆ ಮಾಡುವಂತೆ ಇತರರನ್ನು ಪ್ರಚೋದಿಸಬಾರದು. ಇನ್ನಷ್ಟು ತಿಳಿಯಿರಿ.
ದ್ವೇಷಯುತ ವರ್ತನೆ: ಕುಲ, ಜನಾಂಗೀಯತೆ, ರಾಷ್ಟ್ರೀಯ ಮೂಲ, ಜಾತಿ, ಲೈಂಗಿಕ ಪ್ರವೃತ್ತಿ, ಲಿಂಗ, ಲಿಂಗದ ಗುರುತು, ಧಾರ್ಮಿಕ ಅಸ್ತಿತ್ವತೆ, ವಯಸ್ಸು, ಅಂಗವೈಕಲ್ಯತೆ ಅಥವಾ ಗಂಭೀರ ರೋಗದ ಆಧಾರದ ಮೇಲೆ ನೀವು ಇತರ ಜನರ ಮೇಲೆ ಆಕ್ರಮಣ ಮಾಡಬಾರದು. ಇನ್ನಷ್ಟು ತಿಳಿಯಿರಿ.
ಹಿಂಸಾತ್ಮಕ ದಾಳಿಗಳ ದುಷ್ಕರ್ಮಿಗಳು: ಉಗ್ರವಾದಿಗಳು, ಹಿಂಸಾತ್ಮಕ ತೀವ್ರವಾದಿ ಅಥವಾ ಸಾಮೂಹಿಕ ಹಿಂಸಾತ್ಮಕ ದಾಳಿಗಳ ಪ್ರತ್ಯೇಕ ದುಷ್ಕರ್ಮಿಗಳು ನಿರ್ವಹಿಸುತ್ತಿರುವ ಯಾವುದೇ ಖಾತೆಗಳನ್ನು ನಾವು ತೆಗೆದುಹಾಕುತ್ತೇವೆ, ಮತ್ತು ದುಷ್ಕರ್ಮಿಗಳು ಉತ್ಪಾದಿಸಿದ ಪ್ರಣಾಳಿಕೆ ಅಥವಾ ಇತರ ಕಂಟೆಂಟ್ ಪ್ರಸಾರ ಮಾಡುವ ಟ್ವೀಟ್‌ಗಳನ್ನೂ ನಾವು ತೆಗೆದುಹಾಕಬಹುದು. ಇನ್ನಷ್ಟು ತಿಳಿಯಿರಿ.
ಆತ್ಮಹತ್ಯೆ: ನೀವು ಆತ್ಮಹತ್ಯೆ ಅಥವಾ ಸ್ವಯಂ ಹಾನಿಯನ್ನು ಪ್ರಚೋದಿಸಬಾರದು ಅಥವಾ ಪ್ರೋತ್ಸಾಹಿಸಬಾರದು. ಇನ್ನಷ್ಟು ತಿಳಿಯಿರಿ.
ಸಂವೇದನಾಶೀಲ ಮಾಧ್ಯಮ: ಲೈವ್ ವೀಡಿಯೋ ಅಥವಾ ಪ್ರೊಫೈಲ್ನಲ್ಲಿ ಅಥವಾ ಶೀರ್ಷಿಕೆ ಚಿತ್ರಗಳಲ್ಲಿ ವಿಪರೀತ ರಕ್ತಸಿಕ್ತ ಮಾಧ್ಯಮವನ್ನು ಪೋಸ್ಟ್ ಮಾಡುವಂತಿಲ್ಲ ಅಥವಾ ಹಿಂಸೆ ಅಥವಾ ವಯಸ್ಕರ ಕಂಟೆಂಟ್ಅನ್ನು ಹಂಚಿಕೊಳ್ಳಬಾರದು. ಲೈಂಗಿಕ ಹಿಂಸೆ ಮತ್ತು/ಅಥವಾ ಆಕ್ರಮಣವನ್ನು ವರ್ಣಿಸುವ ಮಾಧ್ಯಮವನ್ನು ಸಹ ಅನುಮತಿಸಲಾಗುವುದಿಲ್ಲ. ಇನ್ನಷ್ಟು ತಿಳಿಯಿರಿ.
ಅಕ್ರಮ ಅಥವಾ ಕೆಲವು ನಿಯಂತ್ರಿತ ಸಾಮಗ್ರಿಗಳು ಅಥವಾ ಸೇವೆಗಳು: ಯಾವುದೇ ಅಕ್ರಮ ಉದ್ದೇಶ ಅಥವಾ ಅಕ್ರಮ ಚಟುವಟಿಕೆಗಳಿಗೆ ನಮ್ಮ ಸೇವೆಯನ್ನು ನೀವು ಬಳಸಬಾರದು. ಅಕ್ರಮ ಸರಕು ಅಥವಾ ಸೇವೆಗಳು ಹಾಗೂ ಕೆಲವು ನಿಯಂತ್ರಿತ ಸರಕುಗಳು ಅಥವಾ ಸೇವೆಗಳ ಕೆಲವು ವಿಧಗಳನ್ನು ಮಾರುವುದು, ಖರೀದಿಸುವುದು ಅಥವಾ ವಹಿವಾಟಿಗೆ ಅನುವು ಮಾಡುವುದನ್ನು ಇದು ಒಳಗೊಂಡಿರುತ್ತದೆ. ಇನ್ನಷ್ಟು ತಿಳಿಯಿರಿ.
ಗೌಪ್ಯತೆ
ಖಾಸಗಿ ಮಾಹಿತಿ: ಇತರ ವ್ಯಕ್ತಿಗಳ ಖಾಸಗಿ ಮಾಹಿತಿಯನ್ನು (ಮನೆಯ ಫೋನ್ ಸಂಖ್ಯೆ ಮತ್ತು ವಿಳಾಸದಂತಹ) ಅವರ ಅಭಿವ್ಯಕ್ತ ದೃಢೀಕರಣ ಮತ್ತು ಅನುಮತಿ ಇಲ್ಲದೆಯೇ ನೀವು ಪ್ರಕಟಿಸಬಾರದು ಅಥವಾ ಪೋಸ್ಟ್ ಮಾಡಬಾರದು. ಖಾಸಗಿ ಮಾಹಿತಿ ಬಹಿರಂಗಪಡಿಸುವ ಬೆದರಿಕೆ ಒಡ್ಡುವುದು ಅಥವಾ ಹಾಗೆ ಮಾಡುವಂತೆ ಪ್ರೋತ್ಸಾಹಿಸುವುದನ್ನೂ ನಾವು ನಿಷೇಧಿಸುತ್ತೇವೆ. ಇನ್ನಷ್ಟು ತಿಳಿಯಿರಿ.
ಸಮ್ಮತಿ ಇಲ್ಲದ ನಗ್ನತೆ: ಇತರರ ಸಮ್ಮತಿ ಇಲ್ಲದೇ ಉತ್ಪಾದಿಸಿದ ಅಥವಾ ವಿತರಿಸಿದ ಅನ್ಯೋನ್ಯ ವೀಡಿಯೋಗಳು ಅಥವಾ ಫೋಟೋಗಳನ್ನು ನೀವು ಪೋಸ್ಟ್ ಮಾಡುವಂತಿಲ್ಲ ಅಥವಾ ಹಂಚಿಕೊಳ್ಳುವಂತಿಲ್ಲ. ಇನ್ನಷ್ಟು ತಿಳಿಯಿರಿ.
ಖಾತೆ ರಾಜಿ: ನಿಮ್ಮ ಸ್ವಂತದ್ದನ್ನು (ಅಥವಾ X ಟೀಮ್ಸ್‌ನ ದೃಢೀಕರಣ, OAuth ದೃಢೀಕರಣ ಅಥವಾ ಇದೇ ರೀತಿಯ ತಾಂತ್ರಿಕತೆಯ ಮೂಲಕ ಹಾಗೆ ಮಾಡಲು ನೇರವಾಗಿ ಅಧಿಕಾರ ಹೊಂದಿರುವವರ) ಹೊರತುಪಡಿಸಿ ಇತರ X ಬಳಕೆದಾರರ ಖಾಸಗಿ ಮಾಹಿತಿ ಅಥವಾ ಖಾತೆ ವೈಶಿಷ್ಟ್ಯಗಳನ್ನು ಪ್ರವೇಶಿಸಲು, ಸೇರಿಸಲು, ಅಳಿಸಲು ಅಥವಾ ಮಾರ್ಪಡಿಸಲು ಅಥವಾ ಲಾಗಿನ್ ಮಾಡಲು ಕ್ರೆಡೆನ್ಷಿಯಲ್‌ಗಳು, ಪಾಸ್‌ವರ್ಡ್‌ಗಳು, ಟೋಕನ್‌ಗಳು, ಕೀಗಳು, ಕುಕೀಗಳು ಅಥವಾ ಇತರ ಡೇಟಾವನ್ನು ನೀವು ಬಳಸುವಂತಿಲ್ಲ ಅಥವಾ ಬಳಸಲು ಪ್ರಯತ್ನಿಸುವಂತಿಲ್ಲ. ಇನ್ನಷ್ಟು ತಿಳಿಯಿರಿ.
ದೃಢೀಕರಣ
ಪ್ಲಾಟ್‌ಫಾರಂ ದುರ್ಬಳಕೆ ಮತ್ತು ಸ್ಪ್ಯಾಮ್: X ನಲ್ಲಿ ಜನರ ಅಭಿವ್ಯಕ್ತಿಯನ್ನು ದುರ್ಬಳಕೆ ಮಾಡುವ ಅಥವಾ ವ್ಯತ್ಯಯಗೊಳಿಸುವ ವರ್ತನೆಯಲ್ಲಿ ನೀವು ತೊಡಗಿಸಿಕೊಳ್ಳುವುದು ಅಥವಾ ಮಾಹಿತಿಯನ್ನು ಹತ್ತಿಕ್ಕುವುದು ಅಥವಾ ಕೃತಕವಾಗಿ ವರ್ಧಿಸುವ ಉದ್ದೇಶದಿಂದ X ಸೇವೆಗಳನ್ನು ನೀವು ಬಳಸಬಾರದು. ಇನ್ನಷ್ಟು ತಿಳಿಯಿರಿ.
ಚುನಾವಣೆ ಸಮಗ್ರತೆ: ಚುನಾವಣೆಗಳು ಅಥವಾ ಇತರ ಆಡಳಿತ ಪ್ರಕ್ರಿಯೆಯನ್ನು ದುರ್ಬಳಕೆ ಮಾಡುವ ಅಥವಾ ಹಸ್ತಕ್ಷೇಪ ಮಾಡುವ ಉದ್ದೇಶಕ್ಕೆ X ಸೇವೆಗಳನ್ನು ನೀವು ಬಳಸಬಾರದು. ಎಲ್ಲಿ, ಹೇಗೆ ಅಥವಾ ಯಾವಾಗ ಆಡಳಿತ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂಬ ಬಗ್ಗೆ ಜನರನ್ನು ತಪ್ಪು ದಾರಿಗೆಳೆಯುವುದು ಅಥವಾ ಭಾಗವಹಿಸುವಿಕೆಯನ್ನು ಹತ್ತಿಕ್ಕಬಹುದಾದ ಕಂಟೆಂಟ್ ಅನ್ನು ಪೋಸ್ಟ್ ಮಾಡುವುದು ಅಥವಾ ಹಂಚಿಕೊಳ್ಳುವುದನ್ನು ಇದು ಒಳಗೊಂಡಿರುತ್ತದೆ. ಇನ್ನಷ್ಟು ತಿಳಿಯಿರಿ.
ತಪ್ಪುದಾರಿಗೆಳೆಯುವುದು ಮತ್ತು ವಂಚಿಸುವ ಗುರುತುಗಳು: ಇತರರನ್ನು ತಪ್ಪುದಾರಿಗೆಳೆಯುವುದು, ಗೊಂದಲಕ್ಕೀಡು ಮಾಡುವುದು ಅಥವಾ ವಂಚಿಸುವುದಕ್ಕಾಗಿ ವ್ಯಕ್ತಿಗಳು, ಸಮೂಹಗಳು ಅಥವಾ ಸಂಸ್ಥೆಗಳನ್ನು ನೀವು ಸುಳ್ಳುಗುರುತು ಮಾಡಬಾರದು ಅಥವಾ X ನಲ್ಲಿ ಇತರರ ಅನುಭವಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಹುಸಿ ಗುರುತನ್ನು ಬಳಸಬಾರದು. ಇನ್ನಷ್ಟು ತಿಳಿಯಿರಿ.
ಕೃತಕ ಮತ್ತು ದುರುದ್ದೇಶಪೂರಿತ ಮಾಧ್ಯಮ: ಹಾನಿಯನ್ನು ಉಂಟುಮಾಡುವ ಸಾಧ್ಯತೆ ಇರುವ ಕೃತಕ ಅಥವಾ ದುರುದ್ದೇಶಪೂರಿತ ಮೀಡಿಯಾವನ್ನು ನೀವು ಮೋಸಮಾಡುವ ಉದ್ದೇಶದಿಂದ ಹಂಚಿಕೊಳ್ಳಬಾರದು. ಜೊತೆಗೆ, ಕೃತಕ ಅಥವಾ ದುರುದ್ದೇಶಪೂರಿತ ಮೀಡಿಯಾದ ನೈಜತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಹೆಚ್ಚುವರಿ ಸಂದರ್ಭವನ್ನು ಒದಗಿಸಲು ಜನರಿಗೆ ಸಹಾಯ ಮಾಡುವುದಕ್ಕಾಗಿ ಅವುಗಳನ್ನು ಒಳಗೊಂಡಿರುವ ಟ್ವೀಟ್ಗಳನ್ನು ನೀವು ಲೇಬಲ್ ಮಾಡಬಹುದು. ಇನ್ನಷ್ಟು ತಿಳಿಯಿರಿ.
ಹಕ್ಕುಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್: ಹಕ್ಕುಸ್ವಾಮ್ಯ ಮತ್ತು ಟ್ರೇಡ್‌ಮಾರ್ಕ್ ಸೇರಿದಂತೆ ಇತರರ ಬೌದ್ಧಿಕ ಸ್ವತ್ತನ್ನು ನೀವು ಉಲ್ಲಂಘಿಸಬಾರದು. ನಮ್ಮ ಟ್ರೇಡ್‌ಮಾರ್ಕ್ ನೀತಿ ಮತ್ತು ಹಕ್ಕುಸ್ವಾಮ್ಯ ನೀತಿಯ ಬಗ್ಗೆ ಇನ್ನಷ್ಟು ತಿಳಿಯಿರಿ.
ವೀಡಿಯೋ ಕಂಟೆಂಟ್ನಲ್ಲಿ ತೃತೀಯ ಪಕ್ಷದ ಜಾಹೀರಾತು
ನಮ್ಮ ಪೂರ್ವ ಸಮ್ಮತಿ ಇಲ್ಲದೇ ತೃತೀಯ ಪಕ್ಷದ ಜಾಹೀರಾತುಗಳಾದ ಪ್ರೀ ರೋಲ್ ವೀಡಿಯೋ ಜಾಹೀರಾತುಗಳು ಅಥವಾ ಪ್ರಾಯೋಜಿತ ಗ್ರಾಫಿಕ್ಗಳನ್ನು ಒಳಗೊಂಡ ವೀಡಿಯೋ ಕಂಟೆಂಟ್ ಅನ್ನು ನಮ್ಮ ಸೇವೆಗಳ ಮೂಲಕ ಸಲ್ಲಿಸಬಾರದು, ಪೋಸ್ಟ್ ಮಾಡಬಾರದು ಅಥವಾ ಡಿಸ್ಪ್ಲೇ ಮಾಡಬಾರದು.
ಜಾರಿ ಮತ್ತು ಮೇಲ್ಮನವಿಗಳು
ಈ ನೀತಿಗಳನ್ನು ಉಲ್ಲಂಘಿಸುವುದರ ಸಂಭಾವ್ಯ ಪರಿಣಾಮಗಳು ಅಥವಾ ಜಾರಿಗೊಳಿಸುವುದನ್ನು ತಪ್ಪಿಸಲು ಯತ್ನಿಸುವುದು ಹಾಗೂ ಮೇಲ್ಮನವಿ ಸಲ್ಲಿಸುವುದೂ ಸೇರಿದಂತೆ ಈ ಕುರಿತು ಜಾರಿಗೊಳಿಸಲು ನಮ್ಮ ವಿಧಾನದ ಬಗ್ಗೆ ಇನ್ನಷ್ಟು ತಿಳಿಯಿರಿ.