ಸೂಚನೆಗಳ ಕಾಲರೇಖೆಯ ಕುರಿತು

 

ಸೂಚನೆಗಳ ಕಾಲರೇಖೆ ಎಂದರೇನು?
 

  • ಸೂಚನೆಗಳ ಕಾಲರೇಖೆಯು X ನಲ್ಲಿ ಇತರರು ಹೇಗೆ ನಿಮ್ಮೊಂದಿಗೆ ಸಂವಹನ ನಡೆಸುತ್ತಿದ್ದಾರೆ ಎಂದು ನೋಡಲು ಸರಳ ವಿಧಾನವನ್ನು ಒದಗಿಸುತ್ತದೆ. 
  • ಸೂಚನೆಗಳ ಕಾಲರೇಖೆಯಿಂದ, ನಿಮ್ಮ ಯಾವ ಟ್ವೀಟ್‌ಗಳನ್ನು ಇಷ್ಟಪಡಲಾಗಿದೆ, ಇತ್ತೀಚಿನ ಮರುಟ್ವೀಟ್‌ಗಳು (ನಿಮ್ಮ ಟ್ವೀಟ್‌ಗಳ), ನಿಮಗೆ ನಿರ್ದೇಶಿಸಿದ ಟ್ವೀಟ್‌ಗಳು (ಪ್ರತಿಕ್ರಿಯೆಗಳು ಮತ್ತು ಹೆಸರಿಸುವಿಕೆಗಳು), ನಿಮ್ಮ ಹೊಸ ಪಟ್ಟಿಯ ಹಿಂಬಾಲಕರು ಹಾಗೂ ನಿಮ್ಮ ಹೊಸ ಖಾತೆಯ ಹಿಂಬಾಲಕರನ್ನು ನೀವು ನೋಡಬಹುದು.
  • ಮೂರು ವಿಧಾನಗಳಲ್ಲಿ ನಿಮ್ಮ ಸೂಚನೆಗಳನ್ನು ನೀವು ನೋಡಬಹುದು: ಹೊಸ ಹಿಂಬಾಲಕರು, ರಿಟ್ವೀಟ್‌ಗಳು, ನಮೂದುಗಳು ಮತ್ತು ಇಷ್ಟಗಳಂತಹ ಖಾತೆ ಚಟುವಟಿಕೆಗಳಿಗೆ ಸೂಚನೆಗಳನ್ನು ಎಲ್ಲ ತೋರಿಸುತ್ತದೆ. ಹೆಸರಿಸುವಿಕೆಗಳು ಎಂಬುದು ನಿಮ್ಮ ಬಳಕೆದಾರರ ಹೆಸರನ್ನು ಹೆಸರಿಸುವ ಟ್ವೀಟ್‌ಗಳಿಗೆ ಸೂಚನೆಗಳನ್ನು ತೋರಿಸುತ್ತವೆ ಮತ್ತು ಪರಿಶೀಲಿಸಲಾಗಿದೆ ಎಂಬುದು ಪರಿಶೀಲಿಸಿದ ನೀಲಿ ಗುರುತುಗಳನ್ನು ಹೊಂದಿರುವ ಖಾತೆಗಳ ಟ್ವೀಟ್‌ಗಳಿಗೆ ಮಾತ್ರ ಸೂಚನೆಗಳನ್ನು ನಿಮಗೆ ತೋರಿಸುತ್ತದೆ.
  • ನಿಮ್ಮ ಸೂಚನೆಗಳ ಜೊತೆಗೆ, ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಿ ಎಂದು ನಾವು ಭಾವಿಸುವ ವಿಷಯವನ್ನು ನಾವು ವರ್ಧಿಸುತ್ತೇವೆ ಮತ್ತು ಸೂಕ್ತ, ವಿಶ್ವಾಸಾರ್ಹ ಮತ್ತು ಸುರಕ್ಷಿತ ವಿಷಯದಂತಹ ಅರ್ಥವತ್ತಾದ ವಿಧಾನದಲ್ಲಿ ಸಂವಹನಕ್ಕೆ ಕೊಡುಗೆ ನೀಡುತ್ತೇವೆ.

ನಾನು ಸ್ವೀಕರಿಸುವ ಸೂಚನೆಗಳನ್ನು ನಾನು ಫಿಲ್ಟರ್ ಮಾಡಬಹುದೇ? 
 

ಹೌದು. ನೀವು ನೋಡುವುದನ್ನು ಮತ್ತು X ನಲ್ಲಿ ಯಾರೊಂದಿಗೆ ನೀವು ಸಂವಹನ ನಡೆಸಬಹುದು ಎಂಬುದನ್ನು ನೀವು ನಿಯಂತ್ರಿಸಬಹುದು. ನೀವು ಸ್ವೀಕರಿಸುವ ಸೂಚನೆಗಳನ್ನು ಫಿಲ್ಟರ್ ಮಾಡಲು ನಿಮ್ಮ ಸೂಚನೆಗಳ ಸೆಟ್ಟಿಂಗ್‌ಗಳಲ್ಲಿ ಮೂರು ಆಯ್ಕೆಗಳನ್ನು ನೀವು ಹೊಂದಿರುತ್ತೀರಿ: ಗುಣಮಟ್ಟದ ಫಿಲ್ಟರ್‌, ಮ್ಯೂಟ್ ಮಾಡಿದ ಶಬ್ದಗಳು ಮತ್ತು ಸುಧಾರಿತ ಫಿಲ್ಟರ್‌ಗಳು.

  • ಗುಣಮಟ್ಟ ಫಿಲ್ಟರ್ ಅನ್ನು ಆನ್ ಮಾಡಿದರೆ, ಕಡಿಮೆ ಗುಣಮಟ್ಟದ ವಿಷಯವನ್ನು ನಿಮ್ಮ ಸೂಚನೆಗಳಿಂದ ಫಿಲ್ಟರ್ ಮಾಡುತ್ತದೆ, ಉದಾಹರಣೆಗೆ ನಕಲಿ ಟ್ವೀಟ್‌ಗಳು ಅಥವಾ ಸ್ವಯಂಚಾಲಿತ ಎಂದು ಕಂಡುಬರುವ ಕಂಟೆಂಟ್‌ ಅನ್ನು ಫಿಲ್ಟರ್ ಮಾಡುತ್ತದೆ. ನೀವು ಹಿಂಬಾಲಿಸುವ ವ್ಯಕ್ತಿಗಳ ಅಥವಾ ನೀವು ಇತ್ತೀಚೆಗೆ ಸಂವಹನ ನಡೆಸಿದ ಖಾತೆಗಳ ಸೂಚನೆಗಳನ್ನು ಇದು ಫಿಲ್ಟರ್ ಮಾಡುವುದಿಲ್ಲ. ನಿಮ್ಮ ಸೂಚನೆ ಸೆಟ್ಟಿಂಗ್‌ಗಳಲ್ಲಿ ಇದನ್ನು ಆನ್ ಅಥವಾ ಆಫ್‌ ಮಾಡುವ ಆಯ್ಕೆಯನ್ನು ನೀವು ಹೊಂದಿದ್ದೀರಿ. (ಈ ಕೆಳಗೆ ಸೂಚನೆಗಳನ್ನು ಪಟ್ಟಿ ಮಾಡಲಾಗಿದೆ.)
  • ಸದ್ದಡಗಿಸು ಶಬ್ದಗಳೊಂದಿಗೆ ನಿಮ್ಮ ಸೂಚನೆಗಳಲ್ಲಿ ನೋಡುವುದನ್ನು ತಪ್ಪಿಸಲು ಬಯಸುವ ನಿರ್ದಿಷ್ಟ ಶಬ್ದಗಳು ಮತ್ತು ಪದಗುಚ್ಛಗಳಿಗೆ ಸೂಚನೆಗಳ ಸದ್ದಡಗಿಸಿ. ಇಲ್ಲಿ ಇನ್ನಷ್ಟು ತಿಳಿಯಿರಿ. ಸೂಚನೆಗಳನ್ನು ನೋಡಲು ಬಯಸದ ಖಾತೆಗಳಿಗೆ ಸೂಚನೆಗಳನ್ನು ಸದ್ದಡಗಿಸಿ. ನೀವು ಹಿಂಬಾಲಿಸುವ ಅಥವಾ ನಿಮಗೆ ಗೊತ್ತಿಲ್ಲದ ಖಾತೆಗಳ ಸದ್ದಡಗಿಸುವುದನ್ನೂ ಇದು ಒಳಗೊಂಡಿರುತ್ತದೆ. ನೀವು ಹಿಂಬಾಲಿಸುವ ಸದ್ದಡಗಿಸಿದ ಖಾತೆಗಳಿಗೆ, ಸದ್ದಡಗಿಸಿದ ಖಾತೆಯ ಪ್ರತಿಕ್ರಿಯೆಗಳು ಮತ್ತು ಪ್ರಸ್ತಾಪಗಳು ನಿಮ್ಮ ಸೂಚನೆಗಳ ಟ್ಯಾಬ್‌ನಲ್ಲಿ ಕಂಡುಬರುತ್ತವೆ. ಇಲ್ಲಿ ಇನ್ನಷ್ಟು ತಿಳಿಯಿರಿ.
  • ನೀವು ದೂರವಿಡಲು ಬಯಸುವ ಕೆಲವು ವಿಧದ ಖಾತಗಳಿಂದ ಸೂಚನೆಗಳನ್ನು ನಿಷ್ಕ್ರಿಯಗೊಳಿಸಲು ಸುಧಾರಿತ ಫಿಲ್ಟರ್‌ಗಳು ನಿಮಗೆ ಅನುವು ಮಾಡುತ್ತವೆ. ಇದರ ಜೊತೆಗೆ, ನಿಮ್ಮ ಖಾತೆಯ ತುಂಬಾ ಹಠಾತ್‌ ಗಮನ ಸೆಳೆದರೆ, ನೀವು ನೋಡುವುದರ ಮೇಲೆ ನಿಮಗೆ ಹೆಚ್ಚಿನ ನಿಯಂತ್ರಣವನ್ನು ಒದಗಿಸುವುದಕ್ಕಾಗಿ ಈ ಫಿಲ್ಟರುಗಳನ್ನು ಹೊಂದಿಸಲು ನಿಮ್ಮ ಸೂಚನೆಗಳಲ್ಲಿ ಸೂಚನೆಯನ್ನು ನೀವು ಸೇರಿಸಬಹುದು. (ಈ ಸೆಟ್ಟಿಂಗ್‌ಗಳ ಕುರಿತು ಈ ಕೆಳಗೆ ಇನ್ನಷ್ಟು ತಿಳಿಯಿರಿ.)
     

ಗಮನಿಸಿ: ನೀವು X ಗೆ ಹೊಸಬರಾಗಿದ್ದರೆ ಅಥವಾ ಆಪ್ ಅನ್ನು ಪುನಃ ಇನ್‌ಸ್ಟಾಲ್ ಮಾಡಿದ್ದರೆ, ಗುಣಮಟ್ಟ ಫಿಲ್ಟರ್ ಸೆಟ್ಟಿಂಗ್ ಡೀಫಾಲ್ಟ್ ಆಗಿ ಆನ್ ಆಗಿರುತ್ತದೆ. ನಿಷ್ಕ್ರಿಯಗೊಳಿಸುವುದು ಮತ್ತು ಸಕ್ರಿಯಗೊಳಿಸುವುದಕ್ಕಾಗಿನ ಸೂಚನೆಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

IOS ಗೆ:
ಹಂತ 1

ನಿಮ್ಮ ಸೂಚನೆಗಳ ಕಾಲರೇಖೆಗೆ ಹೋಗಿ

ಹಂತ 2

ಗೇರ್ ಐಕಾನ್ ಅನ್ನು ಟ್ಯಾಪ್‌ ಮಾಡಿ

ಹಂತ 3

ಆನ್ ಅಥವಾ ಆಫ್‌ ಮಾಡಲು ಗುಣಮಟ್ಟ ಫಿಲ್ಟರ್ ಪಕ್ಕದಲ್ಲಿರುವ ಸ್ಲೈಡರ್ ಅನ್ನು ಎಳೆಯಿರಿ.

ಗಮನಿಸಿ: ಮೇಲಿನ ಮೆನುವಿನಿಂದ ನಿಮ್ಮ ಸೂಚನೆಗಳ ಸೆಟ್ಟಿಂಗ್‌ಗಳನ್ನು ಕೂಡ ನೀವು ಪ್ರವೇಶಿಸಬಹುದು. ನಿಮ್ಮ ಪ್ರೊಫೈಲ್ ಐಕಾನ್ ಅನ್ನು ತಟ್ಟಿ, ನಂತರ ಸೆಟ್ಟಿಂಗ್‌ಗಳು ಮತ್ತು ಗೌಪ್ಯತೆ ಅನ್ನು ತಟ್ಟಿ.

Android ಗೆ:
ಹಂತ 1

ನಿಮ್ಮ ಸೂಚನೆಗಳ ಕಾಲರೇಖೆಗೆ ಹೋಗಿ.

ಹಂತ 2

ಗೇರ್ ಐಕಾನ್ ಅನ್ನು ಟ್ಯಾಪ್‌ ಮಾಡಿ

ಹಂತ 3

ಆನ್ ಅಥವಾ ಆಫ್‌ ಮಾಡಲು ಗುಣಮಟ್ಟ ಫಿಲ್ಟರ್ ಪಕ್ಕದಲ್ಲಿರುವ ಬಾಕ್ಸ್‌ ಗುರುತು ಮಾಡಿ.

ಗಮನಿಸಿ: ನ್ಯಾವಿಗೇಶನ್ ಮೆನು ಐಕಾನ್ ಅಥವಾ ನಿಮ್ಮ ಪ್ರೊಫೈಲ್ ಐಕಾನ್‌ ಮೂಲಕ ನಿಮ್ಮ ಸೂಚನೆಗಳ ಸೆಟ್ಟಿಂಗ್‌ಗಳು ಅನ್ನು ನೀವು ಪ್ರವೇಶಿಸಬಹುದು. ನೀವು ಹೊಂದಿರುವ ಯಾವುದಾದರೂ ಐಕಾನ್ ಮೇಲೆ ತಟ್ಟಿ, ನಂತರ ಸೆಟ್ಟಿಂಗ್​ಗಳು ಮತ್ತು ಗೌಪ್ಯತೆಯನ್ನು ಆಯ್ಕೆ ಮಾಡಿ.

ಡೆಸ್ಕ್​ಟಾಪ್ ಗೆ:
ಹಂತ 1

ನಿಮ್ಮ ಸೂಚನೆಗಳ ಕಾಲರೇಖೆಗೆ ಹೋಗಿ.

ಹಂತ 2

ನಿಮ್ಮ ಸೂಚನೆಗಳನ್ನು ಫಿಲ್ಟರ್ ಮಾಡಲು, ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ.

ಹಂತ 3

ಆನ್ ಅಥವಾ ಆಫ್‌ ಮಾಡಲು ಗುಣಮಟ್ಟ ಫಿಲ್ಟರ್ ಪಕ್ಕದಲ್ಲಿರುವ ಬಾಕ್ಸ್‌ ಕ್ಲಿಕ್ ಮಾಡಿ.


ಸುಧಾರಿತ ಫಿಲ್ಟರ್ ಸೆಟ್ಟಿಂಗ್‌ಗಳು

ನೀವು ದೂರವಿಡಲು ಬಯಸಿದ ಕೆಲವು ಖಾತೆಗಳ ವಿಧದಿಂದ ನೀವು ಸೂಚನೆಗಳನ್ನು ಸ್ವೀಕರಿಸಬಹುದು. ಗುಣಮಟ್ಟ ಫಿಲ್ಟರ್ ಅನ್ನು ಸಕ್ರಿಯಗೊಳಿಸುವುದರ ಜೊತೆಗೆ, ಈ ಮುಂದಿನ ವಿಧದ ಖಾತೆಗಳಿಂದ ಸೂಚನೆಗಳನ್ನು ನಿಷ್ಕ್ರಿಯಗೊಳಿಸಲು ನೀವು ಆಯ್ಕೆ ಮಾಡಿಕೊಳ್ಳಬಹುದು:

  • ಹೊಸ ಖಾತೆಗಳು (ನೀವು ಹಿಂಬಾಲಿಸದಿರುವುದು).
  • ನಿಮ್ಮನ್ನು ಹಿಂಬಾಲಿಸದ ಖಾತೆಗಳು (ನೀವು ಹಿಂಬಾಲಿಸದಿರುವುದು).
  • ನೀವು ಹಿಂಬಾಲಿಸದ ಖಾತೆಗಳು. 
  • ಡೀಫಾಲ್ಟ್ ಪ್ರೊಫೈಲ್ ಫೋಟೋ ಹೊಂದಿರುವ ಖಾತೆಗಳು (ನೀವು ಹಿಂಬಾಲಿಸದಿರುವುದು). 
  • ದೃಢೀಕರಿಸದ ಇಮೇಲ್ ವಿಳಾಸವನ್ನು ಹೊಂದಿಲ್ಲದ ಖಾತೆಗಳು (ನೀವು ಹಿಂಬಾಲಿಸದಿರುವುದು).
  • ದೃಢೀಕರಿಸಿದ ಫೋನ್ ಸಂಖ್ಯೆ ಹೊಂದಿಲ್ಲದ ಖಾತೆಗಳು (ನೀವು ಹಿಂಬಾಲಿಸದಿರುವುದು).
     

X.com ನಲ್ಲಿ ಫಿಲ್ಟರ್‌ಗಳನ್ನು ನಿಗದಿಪಡಿಸಲು:

  1. ನಿಮ್ಮ ಸೂಚನೆಗಳ ಕಾಲರೇಖೆಗೆ ಹೋಗಿ.
  2. ನಿಮ್ಮ ಸೂಚನೆಗಳನ್ನು ಫಿಲ್ಟರ್ ಮಾಡಲು, ಸೆಟ್ಟಿಂಗ್‌ಗಳ ಮೇಲೆ ಕ್ಲಿಕ್ ಮಾಡಿ
  3. ಸುಧಾರಿತ ಫಿಲ್ಟರ್‌ಗಳು ಮೇಲೆ ಕ್ಲಿಕ್ ಮಾಡಿ.
  4. ಆನ್ ಮಾಡಲು ನಿಮ್ಮ ಆದ್ಯತೆಯ ಫಿಲ್ಟರ್‌(ಗಳ) ಬಾಕ್ಸ್‌ ಗುರುತು ಮಾಡಿ.
     

iOS ಗಾಗಿನ X ಬಳಸಿ ಫಿಲ್ಟರ್‌ಗಳನ್ನು ನಿಗದಿಪಡಿಸಲು:

  1. ನಿಮ್ಮ ಸೂಚನೆಗಳ ಕಾಲರೇಖೆಗೆ ಹೋಗಿ.
  2. ಗೇರ್ ಐಕಾನ್ ತಟ್ಟಿ
  3. ಸುಧಾರಿತ ಫಿಲ್ಟರ್‌ಗಳನ್ನು ತಟ್ಟಿ.
  4. ಆನ್ ಮಾಡಲು ನಿಮ್ಮ ಆದ್ಯತೆಯ ಫಿಲ್ಟರ್‌(ಗಳ) ಪಕ್ಕದಲ್ಲಿರುವ ಸ್ಲೈಡರ್ ಎಳೆಯಿರಿ.
     

Android ಗಾಗಿನ X ಬಳಸಿ ಫಿಲ್ಟರುಗಳನ್ನು ನಿಗದಿಸಲು:

  1. ನಿಮ್ಮ ಸೂಚನೆಗಳ ಕಾಲರೇಖೆಗೆ ಹೋಗಿ
  2. ಗೇರ್ ಐಕಾನ್ ತಟ್ಟಿ
  3. ಸುಧಾರಿತ ಫಿಲ್ಟರ್‌ಗಳನ್ನು ತಟ್ಟಿ.
  4. ಆನ್ ಮಾಡಲು ನಿಮ್ಮ ಆದ್ಯತೆಯ ಫಿಲ್ಟರ್‌(ಗಳ) ಬಾಕ್ಸ್‌ ಗುರುತು ಮಾಡಿ.

ಈ ಲೇಖನ ಹಂಚಿಕೊಳ್ಳಿ